ಪಂಜರದ ಗಿಳಿಯ ಹಾಡು
ಯಾರದೋ ಆಸೆಯ ಹೊತ್ತು ತಂದೆನು,
ಯಾರದೋ ಭಾಷೆಯ ಕಲಿತು ನಿಂತೆನು,
ನನ್ನದೆಂಬುದು ಉಳಿದಿಹುದು ಇನ್ನೇನು?
ನನ್ನಲ್ಲಿ ನಾನೇ ಪರಕೀಯನಾದೆನು.
ಆಡಿದ ಮಾತು ವಿವರಣೆಗೆ ಗುರಿಯಾಯ್ತು,
ಆಡದ ಮಾತಿನ ಆಳ ತಿಳಿಯದೇ ಹೋಯ್ತು,
ನಗೆಯ ಅರ್ಥ ಸಂತಸ ಮಾತ್ರವೇ ಏನು?
ಅಳುವು ಬರೀ ದುಃಖದ ದಡವೇನು?
ಮನಸ್ಸು ಏನೋ ಹೇಳುತ್ತಿದೆ,
ಏನೋ ಬೇಡಿಕೆಯ ಮಾಡುತ್ತಿದೆ,
ಅರಿಯದ ಭಾಷೆಯೆನಿಸಿದೆ,
ಇಲ್ಲ, ಮೌನದ ಮಾತು ಇಂದೆನಗೆ ಕೆಳುಸುತ್ತಿದೆ.
ಚಿಂತೆ ಇಲ್ಲದ ಮನಸ್ಸು ಯಾವುದಿದೆ?
ಸಾವಿಲ್ಲದ ಮನೆಯಾವುದಿದೆ?
ಸಾಕು ಬಿಡು ಈ ಸಾಂತ್ವನದ ಮಾತು.
ನನ್ನ ದುಃಖವನ್ನು ನನೆಗೆ ಅನುಭವಿಸಲು ಬಿಡು.
Saturday, September 19, 2009
Subscribe to:
Post Comments (Atom)
No comments:
Post a Comment