ನೀನಿಲ್ಲದೆ
ಅದು ಯಾವ ಜನ್ಮದಲ್ಲಿ ನನ್ನೆದೆಯ ಇನಿಯಳಾದೆ,ಅದು ಯಾವ ಮೈತ್ರ್ಹಿಯಲ್ಲಿ ನನ್ನ ಪ್ರಾಣದ ಹರಣವಾದೆ,
ನನ್ನ ಸುಖದ ಸರಸವಾದೆ,
ನನ್ನ ವಿರಹದ ವಿರಸವಾದೆ.
ಸಾವನಪಿಹುದೋ ನೀನಿತ್ತ ಚುಂಬನಕ್ಕೆ ದುಃಖ,
ಹೊರಬಂದಿಹುದೋ ನನ್ನಾಸೆ, ಕೊಪ ಮಂಡೂಕ,
ಚಿಗುರುತಿಹ ಕನಸು ಅರಳಿ ಹೂವಾಗಿಹುದು,
ಮರಳಿ ಮುರಳಿ ದನಿಯಂತೆ ಮನಸಾಗುತಿಹುದು.
ನಿನ್ನ ಹಾಡಿನಲ್ಲಿ ನನ್ನ ಕಾವ್ಯವ ಕಾಣುವೆ,
ನಿನ್ನ ಕನಸಲಿ ನನ್ನ ಆಸೆಯ ಕಾಣುವೆ,
ನಿನ್ನ ನುಡಿಯಲ್ಲಿ ನನ್ನ ಭಾಷೆಯ ಕಾಣುವೆ,
ನೀನಿಲ್ಲದೆ ನಾ ನನ್ನೇ ಹೇಗೆ ನೋಡುವೆ.
1 comment:
awesome nagaraj! :)
Post a Comment