Saturday, September 19, 2009

Panjarada Gliya Haadu ....

       ಪಂಜರದ ಗಿಳಿಯ ಹಾಡು 


ಯಾರದೋ ಆಸೆಯ ಹೊತ್ತು ತಂದೆನು,
ಯಾರದೋ ಭಾಷೆಯ ಕಲಿತು ನಿಂತೆನು,
ನನ್ನದೆಂಬುದು ಉಳಿದಿಹುದು ಇನ್ನೇನು?
ನನ್ನಲ್ಲಿ ನಾನೇ ಪರಕೀಯನಾದೆನು.

ಆಡಿದ ಮಾತು ವಿವರಣೆಗೆ ಗುರಿಯಾಯ್ತು,
ಆಡದ ಮಾತಿನ ಆಳ ತಿಳಿಯದೇ ಹೋಯ್ತು,
ನಗೆಯ ಅರ್ಥ ಸಂತಸ ಮಾತ್ರವೇ ಏನು?
ಅಳುವು ಬರೀ ದುಃಖದ ದಡವೇನು?

ಮನಸ್ಸು ಏನೋ ಹೇಳುತ್ತಿದೆ,
ಏನೋ ಬೇಡಿಕೆಯ ಮಾಡುತ್ತಿದೆ,
ಅರಿಯದ ಭಾಷೆಯೆನಿಸಿದೆ,
ಇಲ್ಲ, ಮೌನದ ಮಾತು ಇಂದೆನಗೆ ಕೆಳುಸುತ್ತಿದೆ.

ಚಿಂತೆ ಇಲ್ಲದ ಮನಸ್ಸು ಯಾವುದಿದೆ?
ಸಾವಿಲ್ಲದ ಮನೆಯಾವುದಿದೆ?
ಸಾಕು ಬಿಡು ಈ ಸಾಂತ್ವನದ ಮಾತು.
ನನ್ನ ದುಃಖವನ್ನು ನನೆಗೆ ಅನುಭವಿಸಲು ಬಿಡು.

Thursday, September 10, 2009

Neenillade - Kannada

             ನೀನಿಲ್ಲದೆ 
ಅದು ಯಾವ ಜನ್ಮದಲ್ಲಿ ನನ್ನೆದೆಯ ಇನಿಯಳಾದೆ,
ಅದು ಯಾವ ಮೈತ್ರ್ಹಿಯಲ್ಲಿ ನನ್ನ ಪ್ರಾಣದ ಹರಣವಾದೆ,
ನನ್ನ ಸುಖದ ಸರಸವಾದೆ,
ನನ್ನ ವಿರಹದ ವಿರಸವಾದೆ.


ಸಾವನಪಿಹುದೋ ನೀನಿತ್ತ ಚುಂಬನಕ್ಕೆ ದುಃಖ,
ಹೊರಬಂದಿಹುದೋ ನನ್ನಾಸೆ, ಕೊಪ ಮಂಡೂಕ,
ಚಿಗುರುತಿಹ ಕನಸು ಅರಳಿ ಹೂವಾಗಿಹುದು,
ಮರಳಿ ಮುರಳಿ ದನಿಯಂತೆ ಮನಸಾಗುತಿಹುದು.


ನಿನ್ನ ಹಾಡಿನಲ್ಲಿ ನನ್ನ ಕಾವ್ಯವ ಕಾಣುವೆ,
ನಿನ್ನ ಕನಸಲಿ ನನ್ನ ಆಸೆಯ ಕಾಣುವೆ,
ನಿನ್ನ ನುಡಿಯಲ್ಲಿ ನನ್ನ ಭಾಷೆಯ ಕಾಣುವೆ,
ನೀನಿಲ್ಲದೆ ನಾ ನನ್ನೇ ಹೇಗೆ ನೋಡುವೆ.